Psalms 142

ಇಕ್ಕಟ್ಟಿನಲ್ಲಿದ್ದವನ ಪ್ರಾರ್ಥನೆ

ದಾವೀದನ ಪದ್ಯ, ಅವನು ಗುಹೆಯಲ್ಲಿ ಅಡಗಿಕೊಂಡಿದ್ದಾಗ ಮಾಡಿದ ಪ್ರಾರ್ಥನೆ.

(ಕೀರ್ತ. 140; 1 ಸಮು. 22; 24)

1ನಾನು ಯೆಹೋವನಿಗೆ ಮೊರೆಯಿಡುವೆನು,
ಯೆಹೋವನಿಗೆ ಕೂಗಿ ಬಿನ್ನೈಸುವೆನು.
2 ನನ್ನ ಚಿಂತೆಗಳನ್ನು ಆತನ ಮುಂದೆ ಬಿಚ್ಚುವೆನು,
ನನ್ನ ಕಷ್ಟವನ್ನು ಆತನಿಗೆ ಅರಿಕೆಮಾಡುವೆನು.

3

ನನ್ನ ಆತ್ಮವು ಕುಂದಿಹೋದಾಗ,

ನೀನು ನನ್ನ ಮಾರ್ಗವನ್ನು ಬಲ್ಲವನಾಗಿರುತ್ತಿ,
ನಾನು ಹೋಗಬೇಕಾದ ದಾರಿಯಲ್ಲಿ ಅವರು ಉರುಲನ್ನೊಡ್ಡಿದ್ದಾರೆ.
4 ನಾನು ನನ್ನ ಬಲಗಡೆಗೆ ನೋಡಲು,
ಅಲ್ಲಿ ಸಹಾಯಕರು ಯಾರೂ ಇಲ್ಲ,
ಆಶ್ರಯವೂ ನಾಶವಾಯಿತು,
ನನ್ನ ಪ್ರಾಣಕ್ಕೆ ಹಿತಚಿಂತಕರು ಒಬ್ಬರೂ ಇಲ್ಲ.
5 ಯೆಹೋವನೇ, ನಾನು ನಿನಗೆ, <<ನೀನೇ ನನ್ನ ಶರಣನೂ,
ಜೀವಲೋಕದಲ್ಲಿ ನನ್ನ ಪಾಲೂ ಆಗಿದ್ದಿ>> ಎಂದು ಕೂಗಿ ಮೊರೆಯಿಟ್ಟಿದ್ದೇನೆ.

6

ನನ್ನ ಕೂಗನ್ನು ಲಾಲಿಸು, ಬಲು ಕುಗ್ಗಿಹೋಗಿದ್ದೇನೆ.

ಹಿಂಸಕರ ಕೈಯಿಂದ ನನ್ನನ್ನು ತಪ್ಪಿಸು,
ಅವರು ನನಗಿಂತ ಬಲಿಷ್ಠರಾಗಿದ್ದಾರಲ್ಲಾ.
7 ಸೆರೆಯಿಂದ ನನ್ನನ್ನು ಬಿಡಿಸು,
ನಿನ್ನ ನಾಮವನ್ನು ಕೀರ್ತಿಸುವೆನು.
ನೀತಿವಂತರು ನಿನ್ನ ಮಹೋಪಕಾರಕ್ಕಾಗಿ,
ನನ್ನನ್ನು ಸುತ್ತಿಕೊಂಡು ಉತ್ಸಾಹಗೊಳ್ಳುವರು.

Copyright information for KanULB